ಉತ್ತರಕ್ಕೆ ನುಡಿವನ್ನಬರ ನಾನು ಚಿತ್ತದ ಕಲೆಯವನಲ್ಲ.
ಮದಮತ್ಸರಕ್ಕೆ ಹೋರುವನ್ನಬರ ನಾನು
ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನಲ್ಲ.
ಮತ್ತೆ ಸಮಯದಲ್ಲಿ ಹೊತ್ತು ಹೋರಿಹೆನೆಂದಡೆ ನಾನು
ಸಂಸಾರದ ಕತ್ತಲೆಯವನಲ್ಲ.
ಎನ್ನ ನಿಶ್ಚಯದ ಗುಂಡು,
ಎನ್ನ ಬಚ್ಚಬರಿಯ ಬಯಲಬೆಳಗು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.