Index   ವಚನ - 34    Search  
 
ಎಂಬತ್ತು ನಾಲ್ಕು ಲಕ್ಷ ರತ್ನದ ವ್ಯವಹಾರಿಗಳು ರತ್ನವ ಕೆಡಿಸಿ ಅರಸುತ್ತೈದಾರೆ ನೋಡಾ! ರತ್ನ ಮಂಜಿನ ರಂಜನೆ, ಆಗರಕ್ಕೆ ಸಲ್ಲದು. ಹುಟ್ಟಿ ಕೆಟ್ಟ ರತ್ನ ಕೆಟ್ಟ ಕೇಡಿಂಗಿನ್ನೆಂತೊ! ಆಗುಹೋಗಿನ ನಿರ್ಣಯವನು ಸಾಗರ ನುಂಗಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.