Index   ವಚನ - 50    Search  
 
ಕಾಯ ಜೀವವನರಿದೆನೆಂಬವರೆಲ್ಲರೂ ಹೋದರಲ್ಲಾ ಹೊಲಬುದಪ್ಪಿ. ಹೆಣ್ಣು ಹೊನ್ನು ಮಣ್ಣಿಗೆ ಹೋರಾಡುವ ಅಣ್ಣಗಳೆಲ್ಲರೂ ಬಸವಣ್ಣನ ಮನೆಯ ಬಾಗಿಲಲ್ಲಿ ಬಂಧಿಕಾರರಾಗಿ ಕಾಯ್ದುಕೊಂಡಿದ್ದು ಆ ಹೆಣ್ಣು ಹೊನ್ನು ಮಣ್ಣು ತಮ್ಮ ಕಣ್ಣ ಮುಂದಕೆ ಬಾರದಿದ್ದಡೆ ತಮ್ಮ ಮನದಲ್ಲಿ ನೊಂದು ಬೆಂದು ಕುದಿದು ಕೋಟಲೆಗೊಂಡು ಮತ್ತೆಯೂ ತಾವು ಅರುಹಿರಿಯರೆಂದು ಬೆಬ್ಬನೆ ಬೆರತುಕೊಂಡಿಪ್ಪವರಿಗೆ ನಮ್ಮ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.