Index   ವಚನ - 56    Search  
 
ಕೊಂಬಿನ ಮೇಲಣ ಬೇಡಂಗೆ ಶಿವರಾತ್ರಿಯನಿತ್ತನೆಂಬರು; ಕಾಳಿದಾಸಂಗೆ ಕಣ್ಣನಿತ್ತನೆಂಬರು; ಮಯೂರಂಗೆ ಮಯ್ಯನಿತ್ತನೆಂಬರು; ಬಾಣಂಗೆ ಕಯ್ಯನಿತ್ತನೆಂಬುರು; ಸಿರಿಯಾಳಂಗೆ ಮಗನನಿತ್ತನೆಂಬರು; ಸಿಂಧುಬಲ್ಲಾಳರಾಯಂಗೆ ವಧುವನಿತ್ತನೆಂಬರು; ದಾಸಂಗೆ ತವನಿಧಿಯನಿತ್ತನೆಂಬರು. ಆರಾರ ಮುಖದಲ್ಲಿ ಇದೇ ವಾರ್ತೆ ಕೇಳಲಾಗದೀ ಶಬ್ದವನು. ಲಿಂಗವಿತ್ತುದುಳ್ಳಡೆ ಅಚಳಪದವಾಗಬೇಕು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ! ಅದು ನಿಲದ ವಾರ್ತೆ.