ಜಂಗಮಕ್ಕೆ ಅರಿವ ಮರೆದಾಗಲೆ
ಅಪಮಾನ ಹೋಯಿತ್ತು.
ಭಕ್ತಂಗೆ ಸತ್ಯ ಸದಾಚಾರವ
ಬಿಟ್ಟಾಗಲೆ ಅಪಮಾನ ಹೋಯಿತ್ತು.
ಈ ಅಪಮಾನವಲ್ಲದೆ,
ದ್ವಾರ ಮಲಭಾಂಡಕ್ಕೆ
ಹೋರಿಯಾಡುವರಿಗೇಕೆ ಚಿತ್ತಶುದ್ಧ?
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
Art
Manuscript
Music
Courtesy:
Transliteration
Jaṅgamakke ariva maredāgale
apamāna hōyittu.
Bhaktaṅge satya sadācārava
biṭṭāgale apamāna hōyittu.
Ī apamānavallade,
dvāra malabhāṇḍakke
hōriyāḍuvarigēke cittaśud'dha?
Cikkayyapriya sid'dhaliṅga illa illa ende.