Index   ವಚನ - 76    Search  
 
ದಗ್ಧವಾದ ಮರ ಇದ್ದಿಲಲ್ಲದೆ ಕಾಷ್ಠಕ್ಕೆ ಹೊದ್ದಿಗೆ ಉಂಟೆ? ಕಿಗ್ಗಯ್ಯ ನೀರು ತಟಾಕಕ್ಕೆ ಹೊದ್ದಿದುದುಂಟೆ? ಅರಿದು ಮರೆದವಂಗೆ ಸಮಯದ ಹೊದ್ದಿಗೆ ಏನು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.