Index   ವಚನ - 80    Search  
 
ನಾನಾ ವೃಕ್ಷಂಗಳೊಳಗೆ ವಸ್ತು ತಾನೇ. ನಾನಾ ಗಿರಿಪರ್ವತಂಗಳಲ್ಲಿಯೂ ತಾನೇ. ಸಕಲ [ಸಮು]ದ್ರ ಆಕಾಶಾದಿ ಭುವನ ಬ್ರಹ್ಮಾಂಡ ಪಿಂಡಂಗಳೆಲ್ಲವು ತಾನೆಂದರಿಯದೆ, ಇದಿರಲ್ಲಿ ವಸ್ತು ಉಂಟೆಂಬ ಷಟ್ಸ್ಥಲಬ್ರಹ್ಮಿ ನೀ ಕೇಳಾ, ಗಿರಿ.... ನೆವುಂಟೆ? ಲಿಂಗವಾಗಿ ಸಂಗವನರಸಲುಂಟೆ? ಬೆಳಗೆಂಬ ಸಂದೇಹನ... ದ್ವಂದ್ವದ ಪ್ರಸಂಗವೆಲ್ಲಿಯದು ಹೇಳಾ. ನಿಂದ ನಿಲವೆ ತಾನಾದ ಅಬದ್ಧಂಗೆ ನಿರಾಳ ಸುರಾಳವೆಲ್ಲಿಯದು ಹೇಳಾ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು