ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು.
ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು.
ಅದನೇನೆಂಬೆನೇನೆಂಬೆನು,
ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ.
ಉಭಯಲಿಂಗ ನಾಮ ನಷ್ಟವಾದಡೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ.
Art
Manuscript
Music
Courtesy:
Transliteration
Prāṇaliṅgavendaḍe hēḷade hōyittu.
Liṅgaprāṇavendaḍe tannalle hiṅgittu.
Adanēnembenēnembenu,
mūru lōkavella toḷali baḷaluttide.
Ubhayaliṅga nāma naṣṭavādaḍe
cikkayyapriya sid'dhaliṅga illa illa embe.