Index   ವಚನ - 105    Search  
 
ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ, ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ, ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ, ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ, ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನ್ನುತ್ತಿದ್ದೆನು.