ಮುನ್ನವೇ ಆಚಾರಕ್ಕೆ ಹೊರಗು, ನಾನನಾಚಾರಿಯಾದ ಕಾರಣ,
ನಿಮ್ಮಂತಹವನಲ್ಲ.
ಸಮಯಕ್ಕೆ ಹೊರಗು ಜಗದೊಳಗು.
ಎನ್ನ ಅರಿಕೆ ಎನಗೆ, ನಿಮ್ಮ ಸಮಯ ನಿಮಗೆ.
ಓಗರವನಿಕ್ಕುವಾತನ ಮನೆಯ ಬಾಗಿಲು
ಮುಚ್ಚಿಹಿತು ಹೋಗಿರಣ್ಣಾ.
ಅನಾಚಾರಿಯ ಮುಖವ ಸದಾಚಾರಿಗಳು ನೋಡಿ ಕೆಡಬೇಡ,
ಕೀಳ ತೆಣಕಲಿಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.