Index   ವಚನ - 111    Search  
 
ಮೂರ ಬಿಟ್ಟವಂಗಲ್ಲದೆ ಸತ್ಯವ ಸಾಧಿಸಬಾರದು. ಆರ ಬಿಟ್ಟವಂಗಲ್ಲದೆ ಆದರಿಸಬಾರದು. ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು. ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.