Index   ವಚನ - 132    Search  
 
ಸ್ಥಲನಲ್ಲ ಕುಳನಲ್ಲ ನಿಃಸ್ಥಲನಲ್ಲ! ನಿರಾಧಾರ ನಿಶ್ಚಿಂತ ನಿಗಮಗೋಚರ ನಿಸ್ಸೀಮ ನಿರಾಲಂಬ ಸರ್ವಶೂನ್ಯ ಸತ್ತು ಚಿತ್ತಾನಂದಾದಿಗಳಿಗೆ ನಿಲುಕುವನಲ್ಲ. ತತ್ವಬ್ರಹ್ಮಾಂಡಾದಿ ಲೋಕಾಲೋಕಂಗಳ ಕಲ್ಪಿಸಿ ನುಡಿವವನಲ್ಲ. ಇವೇನೂ ಇಲ್ಲದ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.