Index   ವಚನ - 133    Search  
 
ಸಾಧಕನವನೊಬ್ಬ ನೇತ್ರವಟ್ಟೆಯನುಟ್ಟುಕೊಂಡು ಸೂತ್ರಧಾರಿಯನರಸುತ್ತ ಬಂದನಯ್ಯಾ! ಕರೆಯಿರಯ್ಯಾ ಕರೆದು ತೋರಿಸಿರಯ್ಯಾ ಕರೆಹಕ್ಕೆ ನೆರಹಕ್ಕೆ ಹೊರಗಾದನು, ಹೋಗೋ ಬಾರೋ ಎಂದಲ್ಲಿಯೆ ಅಡಗಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.