ಕುಂದಣಕ್ಕೆ ಒಪ್ಪುವ ಒರೆ ಬಣ್ಣದಮಿಶ್ರವಂ
ಚಿನ್ನವರದ ಬಲ್ಲನಲ್ಲದೆ
[ಗೇ]ಯ್ದುಂಬ ಒಕ್ಕಲಮಗನೆಂತು ಬಲ್ಲನಯ್ಯ?
ವಸ್ತುವನೊಡಗೂಡುವ ಸಂಧಾನದ ನುಡಿಯಗಡಣದ
ಲಿಂಗ ಬೆಳಗ ಲಿಂಗಸಂಧಾನಿ ಬಲ್ಲನಲ್ಲದೆ
ಅರಿವು ಮರವೆಯನೊಳಕೊಂಡಿಪ್ಪ
ವೇಷಧಾರಿಗಳವರೆಂತು ಬಲ್ಲರಯ್ಯ?
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Kundaṇakke oppuva ore baṇṇadamiśravaṁ
cinnavarada ballanallade
[gē]ydumba okkalamaganentu ballanayya?
Vastuvanoḍagūḍuva sandhānada nuḍiyagaḍaṇada
liṅga beḷaga liṅgasandhāni ballanallade
arivu maraveyanoḷakoṇḍippa
vēṣadhārigaḷavarentu ballarayyā?
Ghanaliṅgiya mōhada cennamallikārjuna.