Index   ವಚನ - 64    Search  
 
ಎನ್ನ ಕಾಯ ಪ್ರಸಾದವಾಯಿತ್ತು. ಎನ್ನ ಜೀವ ಪ್ರಸಾದವಾಯಿತ್ತು. ಎನ್ನ ಪ್ರಾಣ ಪ್ರಸಾದವಾಯಿತ್ತು. ಎನ್ನ ಕರಣೇಂದ್ರಿಯಂಗಳೆಲ್ಲವು ಪ್ರಸಾದವಾದುವು ನೋಡಾ. ನೀವೆನ್ನ ಕರಸ್ಥಲದಲ್ಲಿ ಪ್ರಸಾದ ರೂಪಾದಿರಾಗಿ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.