Index   ವಚನ - 65    Search  
 
ಅಗ್ನಿ ಅಗ್ನಿಯ ಕೂಡಿ ಬೆಳಗು ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ವುದಲ್ಲದೆ ಬೆಳಗು ನಿಜವಹುದೆ ಅಯ್ಯ? ಆ ಪರಮಾರ್ಥವ ತಿಳಿದ ಪರಮಜ್ಞಾನಿಯ ಕೂಡೆ ಸಮ್ಯಜ್ಞಾನಿ ಅನುಭವ ಬಾಯಿದೆಗೆದೊಡೆ ಉಭಯದ ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.