ಕನ್ನಡಿಯಲ್ಲಿ ತೋರುವ ಕಣ್ಣು
ನೋಡುವ ಕಣ್ಣು ಕಾಬುದು ಹುಸಿ.
ಇದು ದಿಟದಂತೆ ತೋರಿದ ಬುದ್ಧಿ
ದರ್ಪಣದಲ್ಲಿ ತೋರುವ ಹುಸಿಯಂತೆರಡು ಜೀವನು.
ಈ ಜೀವನು ಶುದ್ಧ ಚಿದ್ರೂಪವ ಕಾಬ ಕೂಡುವ
ನಾನೀನೆಂಬುದು ಮಿಥ್ಯೆ, ಜೀವಭಾವಮಿಂತುಟು.
ನಾ ನಿರ್ವಾದವೆಂದು ತಿಳಿದ ಬುದ್ಧಿಯ ಭಾವ
ಸದಾನಂದಸ್ವರೂಪನಪ್ಪ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.