Index   ವಚನ - 33    Search  
 
ಕರ್ಮಿ ಭಕ್ತ ಜ್ಞಾನಿ ಲೌಕಿಕವೆಂಬ ಚತುರಾಶ್ರಮಿಗಳಿಗೆ ತ್ರಿಜಗದೊಳಗೆ ಶ್ರುತ್ಯಾನುಭವ ಸಿದ್ಧವಾಗಿಹುದು. ಹಿಡಿದು ಸುಖವಿಲ್ಲ, ಬಿಟ್ಟು ದುಃಖವಿಲ್ಲ. ನೆರೆಯರಿದು ವಿಷಯಂಗಳ ಬಿಟ್ಟಡೆ ಪರಮಾನಂದವೆಂದೆಂದಿಗೂ ಸೋಹಂಭಾವವಹುದು. ಈ ಸೋಹಂಭಾವದಲ್ಲಿ ನಿಂದಂದು ಈ ದೇಹದ ಅಹಂಮಮತೆಯೆಂಬ ಜಡಮಾಯೆ ಉಳಿವುದೆ, ಸಿಮ್ಮಲಿಗೆಯ ಚೆನ್ನರಾಮನಾಥನ ಭಾವಿಸಿ ನೋಡಿದಲ್ಲಿ!