Index   ವಚನ - 48    Search  
 
ಗೋವಾದಿಯಾದ ಸಾಕಾರಾದಿ ಭೌತಿಕಂಗಳನತಿಗಳೆದು ನಿರಾಕಾರ ಪ್ರಾಣಾದಿಯಾದ ಮನೇಂದ್ರಿಯಂಗಳ ನೆಲೆಗಳೆದು ಅರಿವಿನರಿವಿಂದವೇ ನೋಡಿ, ಅರಿವು ಮರವೆಗಳೆರಡನು ನೇತಿಗಳೆದು ಏನೂ ಇಲ್ಲದೆ ಶೂನ್ಯವಾಗಿ ನಿಂದ ನಿಜಸ್ವರೂಪ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.