Index   ವಚನ - 61    Search  
 
ತನು ಕಿಂಕರನಾಗದೆ, ಮನ ಕಿಂಕರನಾಗದೆ, ಇಂದ್ರಿಯ ಕಿಂಕರನಾಗದೆ, ಆತ್ಮ ಕಿಂಕರನಾಗದೆ, ಶ್ರುತಿ ಕಿಂಕರನಾಗದೆ ಇವೆಲ್ಲವ ನೆರೆ ತೊರೆದು ಏನು ಎನ್ನದೆ ಮರ್ಯಾದೆ ತಪ್ಪದೆ ಸದ್ಗುರು ಕಿಂಕರನಾಗಿ ಭವಗೆಟ್ಟು ಹೋದವರನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.