Index   ವಚನ - 117    Search  
 
ಮುನ್ನವೆ ಮೂರರ ಹಂಬಲ ಹರಿದು ಗುರು ಚರ ವಿರಕ್ತನಾದ ಬಳಿಕ ಇನ್ನೂ ಮೂರರ ಜಿಹ್ವೆಯ ಹಂಬಲೇಕೆ? ಆವಾವ ಜೀವಂಗಳು ತಮ್ಮವಲ್ಲದೆ ಮುಟ್ಟವಾಗಿ ತೊಂಡ ಮಚ್ಚಿದ ಜೀವದನದಂತೆ, ಊರೂರ ತಪ್ಪದೆ ಹರಿದು ಜೋಗಿಯ ಕೈಯ ಕೋಡಗದಂತೆ. ಅನ್ಯರಿಗೆ ಹಲುಗಿರಿದು ವಿರಕ್ತನೆನಿಸಿಕೊಂಬ ಯುಕ್ತಿಹೀನರ ಕಂಡಡೆ ಎನ್ನ ಮನ ನಾಚಿತ್ತು ಸಿಮ್ಮಲಿಗೆಯ ಚೆನ್ನರಾಮಾ.