Index   ವಚನ - 126    Search  
 
ವಿಧಿ ನಿಷೇಧ ಜನನಿ ಜನಕ ಕುಲಗೋತ್ರ ಜಾತಿ ಭೇದಾಭೇದ ಸ್ವರ್ಗನರಕಾದಿ ಭಯವೇನೂ ಇಲ್ಲ, ಜಗವೇನೂ ಇಲ್ಲ. ``ಅತ್ರ ಪಿತಾ ಪಿತಾ ಭವತಿ ಮಾತಾ ಮಾತಾ ಲೋಕಾ ಲೋಕಾ ದೇವೋದೇವ ವೇದೋವೇದ ಬ್ರಾಹ್ಮಣೋ ಬ್ರಾಹ್ಮಣಶ್ಚಾಂಡಾಲೋ ಚಾಂಡಾಲಃ||" ಎಂದುದು ವೇದ. ಅದು ತಾನೆ ತನ್ನಿಂದನ್ಯವಿಲ್ಲ. ತೋರುವ ತೋರಿಕೆಯೆಲ್ಲ ಮಾಯೆಯೆಂದರಿದು ಜ್ಞಾನಾನಂದ ಪರಿಪೂರ್ಣ ತಾನೆಂದರಿದು ನೀನಾಗಿ ನಿಂದ ನಿಜಗುಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.