Index   ವಚನ - 138    Search  
 
ಸರ್ವಂ ಖಲ್ವಿದಂ ಬ್ರಹ್ಮ' ಎಂದುದು ವೇದ. 'ತ್ವಮೇವ ಬ್ರಹ್ಮ ನಾನ್ಯಾತೋಸ್ಮಿನ್' ಎಂದುದು ವೇದ. 'ನಾನ್ಯಾತೋಸ್ಮಿನ್ ದೃಷ್ಟಾ' ಎಂದುದು ವೇದ. 'ನಾನ್ಯತ್ ಕಿಂಚಿದ್ ವಿದ್ಯತೇ' ಎಂದುದು ವೇದ. 'ನ ಕರ್ಮಣಾ ಲಿಪ್ಯತೇ' ಎಂದುದು ವೇದ. ತನ್ನಿಂದನ್ಯವೇನೂ ಇಲ್ಲವೆಂದರಿದರಿವು ಸಚ್ಚಿದಾನಂದಸ್ವರೂಪಮಪ್ಪ ನಿಜವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.