Index   ವಚನ - 139    Search  
 
ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು, ಅಟ್ಟುಂಡೆಹೆನೆಂದು ಒಲೆಯ ಬೂದಿಯ ತೋಡುವನ್ನಕ್ಕ ಒಳಗೊಂದು ಕಿಡಿಯಿದ್ದು ಕೈಬೆಂದು ಮರಗುವಂತಾಯಿತ್ತಲ್ಲಾ ಎನಗೆ! ನಿಸ್ಸಂಸಾರಿಯ ಒಡಲೊಲೆಯ ಬೂದಿಯ ಕೆಣಕುವನ್ನಕ್ಕ ಒಳಗೊಂದು ಸುಜ್ಞಾನವೆಂಬ ಕಿಡಿಯಿದ್ದು ಎನ್ನ ಮನದ ಕೈ ಬೆಂದು ಹೃದಯ ಮರಗುತ್ತಿದ್ದೇನೆ. ಇದಕ್ಕೆ ಶೀತಾಳಮಂತ್ರವುಂಟೆ ಅಯ್ಯಾ! ಎನ್ನ ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ನಿಜಗುಣ ಶರಣೆಂಬುದೆ ಇದಕ್ಕೆ ಶೀತಾಳಮಂತ್ರ.