Index   ವಚನ - 149    Search  
 
ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ ನಡೆಯಲ್ಲಿ ಹಾವ ಕಂಡು ಮರಳುವ ಗಾವಿಲತನವ ನೋಡಾ! ತನ್ನಿಂದನ್ಯವೆಂದಡೆ ಭಿನ್ನ ವ್ಯತಿಕರವಾಯಿತ್ತು. ತನ್ನ ಪರಮಾರ್ಥ ತನ್ನಲ್ಲಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಮಾಯಾಮರ್ಕಟ, ಜಡವೆ!