Index   ವಚನ - 13    Search  
 
ಹಸ್ತಮಸ್ತಕಸಂಯೋಗವಾಗದ ಮುನ್ನವೇ ಯೌವನ ಮಥನವಾಯಿತ್ತು. ಆವುದ ಅಂತರಂಗವೆಂಬೆನು? ಆವುದ ಬಹಿರಂಗವೆಂಬೆನು? ಆವುದ ಆತ್ಮಸಂಗವೆಂಬೆನು? ಹಸ್ತಮಸ್ತಕಸಂಯೋಗವೆ ಬಹಿರಂಗ, ಮಂತ್ರ ಮನಸಂಯೋಗವೆ ಅಂತರಂಗ. ಕೂಡಲಚೆನ್ನಸಂಗಯ್ಯನೆಂಬ ಲಿಂಗದಲ್ಲಿ ಪ್ರಾಣಸಂಯೋಗವಾಗಿ ಸರ್ವಾಲಿಂಗವಾಯಿತ್ತು.