Index   ವಚನ - 19    Search  
 
ಹೆಗ್ಗಣವನಿಕ್ಕಿ ನೆಲಗಟ್ಟ ಕಟ್ಟಿದಂತೆ, ಎನ್ನ ಕಾಯಗುಣ ಅಹಂಕಾರ ಪ್ರಬೋಧೆಗಳಯ್ಯಾ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳನಿಕ್ಕಿ ಎನ್ನ ಮಾಡಿದಿರಿ, ಎನ್ನ ಬಾಧಿಸಲೆಂದು. ಲಿಂಗಯ್ಯ ತಂದೆ, ಆಧಿವ್ಯಾಧಿಗಳೆಲ್ಲವ ಕಳೆದು ನಿರ್ವಾಣವಪ್ಪ ಪಥವ ಕರುಣಿಸಯ್ಯಾ, ಕೂಡಲಚೆನ್ನಸಂಗಮದೇವಾ.