ಶ್ರೀಗುರುಲಿಂಗವು ಶಿಷ್ಯನ ಬರವ ಕಂಡು,
ಬಂದು ಪಾದದ ಮೇಲೆ ಬೀಳುವಾತ ಗುರುಲಿಂಗ,
ಮಂಡೆಯ ಹಿಡಿದೆತ್ತುವಾತ ಶಿಷ್ಯ.
ಶ್ರೀಗುರುಲಿಂಗವು ಶಿಷ್ಯನ ಸಿಂಹಾಸನದಲ್ಲಿ ಕುಳ್ಳಿರಿಸಿ
ಪಾದಾರ್ಚನೆಯ ಮಾಡುವಾತ ಗುರುಲಿಂಗ,
ಮಾಡಿಸಿಕೊಂಬಾತ ಶಿಷ್ಯ.
ಶ್ರೀಗುರುಲಿಂಗವು ಶಿಷ್ಯನಾರೋಗಣೆಯ
ಮಾಡುತ್ತಿದ್ದಾನೆಂದು ಬಂದು,
ಪ್ರಸಾದವ ಕೊಂಬಾತ ಗುರುಲಿಂಗ,
ಇಕ್ಕುವಾತ ಶಿಷ್ಯ.
ಇದು ಕಾರಣ
ದ್ವಿವಿಧ ಸಂಬಂಧ ಸನುಮತವಾಯಿತ್ತು,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
Art
Manuscript
Music
Courtesy:
Transliteration
Śrīguruliṅgavu śiṣyana barava kaṇḍu,
bandu pādada mēle bīḷuvāta guruliṅga,
maṇḍeya hiḍidettuvāta śiṣya.
Śrīguruliṅgavu śiṣyana sinhāsanadalli kuḷḷirisi
pādārcaneya māḍuvāta guruliṅga,
māḍisikombāta śiṣya.
Śrīguruliṅgavu śiṣyanārōgaṇeya
māḍuttiddānendu bandu,
prasādava kombāta guruliṅga,
ikkuvāta śiṣya.
Idu kāraṇa
dvividha sambandha sanumatavāyittu,
kūḍalacennasaṅgā nim'ma śaraṇaṅge.