ಹರ ತನ್ನ ರೂಪ ತೋರಬೇಕೆಂದು,
ಮರ್ತ್ಯಕ್ಕೆ ಶ್ರೀಗುರು ರೂಪಾಗಿ ಬಂದು
ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ,
ಕರಸ್ಥಲಕ್ಕೆ ಲಿಂಗವಾದ ಪ್ರಾಣಸ್ಥಲಕ್ಕೆ ಜಂಗಮವಾದ.
ಇಂತೀ ಚತುರ್ವಿಧ ಸಾಹಿತ್ಯವಾದನಯ್ಯಾ
ಕೂಡಲಚೆನ್ನಸಂಗನ[ಲ್ಲಿ] ಬಸವಣ್ಣನು.
Art
Manuscript
Music Courtesy:Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha