Index   ವಚನ - 21    Search  
 
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗವಿಲ್ಲದಲ್ಲಿಂದತ್ತ ನೋಡಾ! ಧರೆಯು ಬ್ರಹ್ಮಾಂಡವು ಮೂರುತಿಗೊಳ್ಳದಲ್ಲಿಂದತ್ತ ನೋಡಾ! ಉಪಮಿಸಬಾರದ ಘನಪ್ರಸಾದವ ಸಾದಿಸಿ ತಂದು ಎನ್ನ ಕೈಯಲಿ ನಿಕ್ಷೇಪ[ವಾಗಿ] ಕೊಟ್ಟನಯ್ಯಾ ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣನು.