Index   ವಚನ - 24    Search  
 
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದನಯ್ಯಾ ಬಸವಣ್ಣ. ಪಂಚಭೂತ ಕಾಯವೆಂದೆನಿಸದೆ, ಪ್ರಸಾದ ಕಾಯವೆಂದೆನಿಸಿದೆನಯ್ಯಾ ಬಸವಣ್ಣನು. ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದನಯ್ಯಾ ಬಸವಣ್ಣನು, ಜಗಭರಿತ ಶಿವನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದನಯ್ಯಾ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.