Index   ವಚನ - 28    Search  
 
ʼಗುರು ಲಿಂಗ ಒಂದೆʼ ಎಂಬ, ಸಂತೆಯ ಸುದ್ದಿಯ ಬಾಲಭಾಷೆಯ ಕೇಳಲಾಗದು. ಲಿಂಗಸಹಿತ ಪ್ರಸಾದ ಭೋಗ, ಲಿಂಗಸಹಿತ ನಿದ್ರೆ. ಗುರು ಲಿಂಗ ಒಂದೆಯೆಂದು ಕಂಡರೆ ಅಘೋರನರಕ ಕೂಡಲಚೆನ್ನಸಂಗಮದೇವಾ.