Index   ವಚನ - 48    Search  
 
ಪೃಥ್ವಿಯ ಪೂರ್ವಾಶ್ರಯ ರಂಗವಲ್ಲಿಯಲ್ಲಿ ಹೋಹುದು. ಅಪ್ಪುವಿನ ಪೂರ್ವಾಶ್ರಯ ವಿಭೂತಿಯಿಂದ ಹೋಹುದು. ಅಗ್ನಿಯ ಪೂರ್ವಾಶ್ರಯ ಧೂಪದಿಂದ ಹೋಹುದು. ವಾಯುವಿನ ಪೂರ್ವಾಶ್ರಯ ಧ್ಯಾನದಿಂದ ಹೋಹುದು. ಆಕಾಶದ ಪೂರ್ವಾಶ್ರಯ ಜಪಸ್ತೋತ್ರದಿಂದ ಹೋಹುದು. ಚಂದ್ರ ಸೂರ್ಯ ಆತ್ಮನ ಪೂರ್ವಾಶ್ರಯ ಮಾಡುವ ಕಿಂಕಿಲದಿಂದ ಹೋಹುದು. ಇದು ಕಾರಣ ಭಕ್ತಕಾಯ ಮಮಕಾಯ ಕೂಡಲಚೆನ್ನಸಂಗಮದೇವ.