Index   ವಚನ - 122    Search  
 
ಜಾತಿಸೂತಕ ಬಿಡದು, ಜನನಸೂತಕ ಬಿಡದು, ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು, ಕುಲ ಸೂತಕ ಬಿಡದು. ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು, ಇವರನೆಂತು ಭಕ್ತರರೆಂಬೆ? ಇವರನೆಂತು ಯುಕ್ತರೆಂಬೆ. ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯವ ಕಳೆದು ಹಸ್ತಮಸ್ತಕ ಸಂಯೋಗಮಂ ಮಾಡಿ ಉಪದೇಶವನಿತ್ತ ಬಳಿಕ ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತ. ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ. ಇದು ಕಾರಣ ಕೂಡಲಚೆನ್ನಸಂಗಹಾದೇವಯ್ಯಾ ಸದ್ಭಕ್ತಂಗೆ ಸೂತಕವ ಮಾಡಲಿಲ್ಲ.