Index   ವಚನ - 136    Search  
 
ಗುರುಲಿಂಗಜಂಗಮ ಸನುಮತವಾದ ಕ್ರೀಯನು ಅಹುದಾಗದೆಂಬ ಸಂದೇಹಬೇಡ. ಕ್ರೀವಿಡಿದು ತನುವ ಗಮಿಸೂದೂ, ಅರಿವಿಡಿದು ಮನವ ಗಮಿಸೂದು. "ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ಧಂ ತು ಶಾಂಕರಿ"|| ಎಂದುದಾಗಿ ಕ್ರಿಯಾನುಭಾವದಿಂದ ಸಕಳೇಂದ್ರಿಯಂಗಳು ಕೂಡಲಚೆನ್ನಸಂಗಯ್ಯನಲ್ಲಿಯೆ ತಲ್ಲೀಯ ತದ್ರೂಪ.