Index   ವಚನ - 140    Search  
 
"ಅಕಾಯೋ ಭಕ್ತಕಾಯಶ್ಚ ಮಮ ಕಾಯಸ್ತು ಭಕ್ತಿಮಾನ್" ಎಂಬ ಶ್ರುತಿಯನೋದುವರೆ ಎಂತೊ ಭಕ್ತಂಗೆ? "ಮಹಂತೋ ಲಿಂಗರೂಪೇಣ ಮಹಂತೋ ಜಂಗಮಾಸ್ತಥಾ" ಎಂಬ ಶ್ರುತಿಯನೋದುವರೆ ಎಂತೊ ಜಂಗಮಕ್ಕೆ? ಇಂತೆರಡೊಂದಾದರೆ ತೆರಹಿಲ್ಲ ಕೂಡಲಚೆನ್ನಸಂಗಾ ನಿಮ್ಮಲ್ಲಿ.