ದ್ವಿಜರು ಪ್ರತಿಸಾಂವತ್ಸರಿಕ ಶ್ರಾದ್ಧವ ಮಾಡುವಲ್ಲಿ,
"ವಿಶ್ವೇದೇವಾನುಜ್ಞಯಾ ಪಿತೃಕಾರ್ಯೇ ಪ್ರವರ್ತಯೇತ್"
ಎಂಬ ವಚನವಿಡಿದು
"ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು"
ಎಂದು ಪಿಂಡವನಿಟ್ಟು,
"ವಸುರುದ್ರಾರ್ಕರೂಪೇಣ ಮಧ್ಯಪಿಂಡಸ್ತು ಪುತ್ರತಃ|
ವೇದೋಕ್ತರುದ್ರನಿರ್ಮಾಲ್ಯಂ ಕಿಂ ಪುನರ್ಬಹುಭಾಷಣೈ"||
ಎಂದು ರುದ್ರಪಿಂಡದಿಂ ಜನಿಸಿ,
"ಜನ್ಮನಾ ಜಾಯತೇ ಶೂದ್ರಃ"
ಎನಿಸಿಹನೆಂಬ ಶ್ರುತಿಯ ತೊಡೆದು,
ಸಾವಿತ್ರಪ್ರದಾನ ಗಾಯತ್ರೀ ಉಪದೇಶವಂ ಮಾಡಿ,
"ಮಾನಸ್ತೋಕೇ ತನಯೇ" ಎಂಬ ಮಂತ್ರದಿಂ
"ತ್ರಿಯಾಯುಷಂ ಜಮದಗ್ನೇಃ" ಎಂದು ವಿಭೂತಿಯನಿಟ್ಟು,
ರುದ್ರಮುಖದಿಂದ ಬ್ರಹ್ಮರಾಗಿ ಶಿವನಿರ್ಮಾಲ್ಯ
ಪಾದೋದಕ ಪ್ರಸಾದಮಂ
ಧರಿಸಲಾಗದೆಂಬ ಶ್ರುತಿಬಾಹ್ಯ
ಶಾಪಹತರನೇನೆಂಬೆನಯ್ಯಾ?
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Dvijaru pratisānvatsarika śrād'dhava māḍuvalli,
viśvēdēvānujñayā pitr̥kāryē pravartayēt
emba vacanaviḍidu
gayāyāṁ śrīrudrapādē dattamastu
endu piṇḍavaniṭṭu,
vasurudrārkarūpēṇa madhyapiṇḍastu putrataḥ|
vēdōktarudranirmālyaṁ kiṁ punarbahubhāṣaṇai||
endu rudrapiṇḍadiṁ janisi,
janmanā jāyatē śūdraḥ
enisihanemba śrutiya toḍedu,
sāvitrapradāna gāyatrī upadēśavaṁ māḍi,
mānastōkē tanayē emba mantradiṁ
triyāyuṣaṁ jamadagnēḥ endu vibhūtiyaniṭṭu,
rudramukhadinda brahmarāgi śivanirmālya
Pādōdaka prasādamaṁ
dharisalāgademba śrutibāhya
śāpahataranēnembenayyā?
Kūḍalacennasaṅgamadēvā.
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲ