ಹಾರುವನ ಭಕ್ತಿ ಪ್ರಾಣ ಹಾರುವನ್ನಕ್ಕ,
ಪ್ರಾಣ ಹಾರಿದಡೆ ಭಕ್ತಿ ಹುರುಳಿಲ್ಲ.
ನೋಡಲಿಲ್ಲ ನುಡಿಸಲಿಲ್ಲ, ಬಿಚ್ಚಿದಡತ್ತಿಯ ಹಣ್ಣು.
ಸಂಪಾದಿಸಲಿಲ್ಲ ಪ್ರಾಣಲಿಂಗ
ಪ್ರಸಾದವ ಮುಂದಿಟ್ಟುಕೊಂಡು.
"ಪ್ರಾಣಾಯ ಸ್ವಾಹಾ, ವ್ಯಾನಾಯ ಸ್ವಾಹಾ
ಅಪಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ"
ಎಂಬ ನರಕಿಗಳ ಮೆಚ್ಚ
ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Hāruvana bhakti prāṇa hāruvannakka,
prāṇa hāridaḍe bhakti huruḷilla.
Nōḍalilla nuḍisalilla, biccidaḍattiya haṇṇu.
Sampādisalilla prāṇaliṅga
prasādava mundiṭṭukoṇḍu.
Prāṇāya svāhā, vyānāya svāhā
apānāya svāhā,
udānāya svāhā, samānāya svāhā
emba narakigaḷa mecca
kūḍalacennasaṅgamadēva.
ಸ್ಥಲ -
ಮಾಹೇಶ್ವರನ ಜ್ಞಾನಿಸ್ಥಲ