Index   ವಚನ - 155    Search  
 
ಆದಿ ಸಂಬಂಧವ ಬಿಟ್ಟು, ಅಪರ ಸಂಬಂಧವ ಹಿಡಿದು, ಅಕ್ಕಟಾ ಕೆಟ್ಟರಲ್ಲಾ ದ್ವಿಜರೆಲ್ಲರು. ಸಪ್ತವ್ಯಾಧರುಗಳು ದಶಾರಣ್ಯದಲ್ಲಿ ಪಿತೃಸಂಕಲ್ಪವ ಮಾಡಿದರೆಂಬುದ ಕೇಳಿ ಅಕ್ಕಟಾ ಕೆಟ್ಟರಲ್ಲಾ ದ್ವಿಜರೆಲ್ಲರು. "ಸಪ್ತವ್ಯಾಧಾ ದಶಾರ್ಣೇಷು ಮೃಗಾಃ ಕಾಲಂಜರೇ ಗಿರೌ| ಚಕ್ರವಾಕಾಸ್ಸರದ್ವೀಪೇ ಹಂಸಾಃ ಸರಸಿ ಮಾನಸೇ|| ಯೇ ಸ್ಮ ಜಾತಾಃ ಕುರುಕ್ಷೇತ್ರೇ ಬ್ರಾಹ್ಮಣಾ ವೇದಪಾರಗಾಃ| ಪ್ರಸ್ಥಿತಾ ದೀರ್ಘಮಧ್ವಾನಂ ಯೂಯಂ ತೇಭ್ಯೋsವಸೀದಥ|| ಆಮೂರ್ತಾನಾಂ ಚ ಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್| ನಮಸ್ಯಾಮಿ ಸದಾ ತೇಷಾಂ ಧ್ಯಾಯಿನಾಂ ಯೋಗಚಕ್ಷುಷಾಮ್|| ಚತುರ್ಭಿಶ್ಚ ಚತುರ್ಭಿಶ್ಚ ದ್ವಾಭ್ಯಾಂ ಪಂಚಭಿರೇವ ಚ | ಹೂಯತೇ ಚ ಪುನರ್ದ್ವಾಭ್ಯಾಂ ಸ ಮೇ ವಿಷ್ಣುಃ ಪ್ರಸೀದತು"|| ಇದು ಕಾರಣ ಆದಿ ಸಂಬಂಧವಂ ಬಿಟ್ಟು ಅಪರ ಸಂಬಂಧವಂ ಹೊದ್ದಿದ ದ್ವಿಜರೆಲ್ಲರೂ ಬೂದಿಯೊಳಗೆ ಹೋಮವ ಬೇಳಿದಂತಾದರಯ್ಯಾ ಕೂಡಲಚೆನ್ನಸಂಗಮದೇವಾ.