Index   ವಚನ - 160    Search  
 
ತನ್ನ ಮನೆಯ ಹೊಗದ ಗುರುವನರಸಿಕೊಂಡು ಹೋಗುವಾತ ಶಿಷ್ಯನಲ್ಲ. ತಾ ಹೊಗದ ಮನೆಯಲುಪದೇಶವ ಮಾಡುವಾತ ಗುರುವಲ್ಲ- "ನಾಮಧಾರಕಶಿಷ್ಯಾಣಾಂ ನಾಮಧಾರೀ ಗುರುಸ್ತಥಾ| ಅಂಧಕೋಂsಧಕರಾಸಕ್ತೋ ಭವೇತಾಂ ಪತಿತಾವುಭೌ"|| ಅಂಗವ ಮಾರಿಕೊಂಡುಂಬ ಶಿಷ್ಯ ಗುರುದ್ರೋಹಿ ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ! ಈ ಗುರು ಶಿಷ್ಯರಿಬ್ಬರ ಭಕ್ತ ಜಂಗಮವೆಂಬವರ ಕೂಡಲಚೆನ್ನಸಂಗಯ್ಯ ನಾಯಕನರಕದೊಳಗಿಕ್ಕುವ.