Index   ವಚನ - 165    Search  
 
ಭವಿ ವಿರಹಿತ ಮಜ್ಜನಕ್ಕೆರೆದೆವೆಂಬರು, ಶ್ವಾನ ಮುಟ್ಟಿದ ಎಂಜಲ ಮನಮುಟ್ಟಿ ಉಣ್ಣೆವೆಂಬರು, ಭವಿಯಿಂದ ಕಷ್ಟವಲ್ಲಾ. ಅನ್ಯದೈವವ ಪೂಜಿಸುವ ಸತಿ ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ. ಭವಿಮಿಶ್ರವಾದ ಮನುಷ್ಯರು ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ. ಶ್ವಾನ ಭವಿಗಳೆದೆವೆಂಬರು, ಅವೆಲ್ಲಿಗೆಯೂ ಹೋಗವು. ಶ್ವಾನ ಭವಿಗಳೆಂಬುಭಯವರ್ಗ ಕಳೆದಲ್ಲದೆ ಕೂಡಲಚೆನ್ನಸಂಗನ ಹೊಂದಬಾರದು.