Index   ವಚನ - 166    Search  
 
ಭವಿವಿರಹಿತ ಭಕ್ತನೆಂದೆಂಬರು, ಭವಿವಿರಹಿತ ಭಕ್ತನಾದ ಪರಿಯೆಂತೋ? "ಭವಿಪಾಕಂ ನಿವೇದ್ಯಂ ಸ್ಯಾತ್ ಬಂಧನಂ ಭವಿಸಂಗಿನಾಂ| ಸರ್ವಲೋಕಸ್ತು ಉಚ್ಛಿಷ್ಟಂ ಸಂಸಾರೋ ಹಿ ತಟಾಕವತ್"|| ಇದನರಿದು ಊರೆಲ್ಲಾ ಒಂದೇ ತಳಿಗೆಯಲುಂಡು ಬೇರೆ ಬೇರೆ ಕೈತೊಳೆದಂತೆ ಕೂಡಲಚೆನ್ನಸಂಗಮದೇವಾ.