Index   ವಚನ - 170    Search  
 
ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು, ಏನೆಂಬೆನಯ್ಯ ಒಚ್ಚೊಚ್ಚಿ ಭಕ್ತರ, ಏನೆಂಬೆನಯ್ಯ ಒಚ್ಚೊಚ್ಚಿ ಭವಿಗಳ? ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಭಕ್ತಕಾಯ ಮಮಕಾಯವೆಂತೆಂಬರು?