Index   ವಚನ - 169    Search  
 
ಭವಿಪಾಕವನುಂಡರೆ ಪ್ರಥಮ ಪಾತಕ, ಪರಧನ ಪರಸತಿಗಳುಪಿದರೆ ಎರಡನೆಯ ಪಾತಕ, ಜಂಗಮನಿಂದೆಯ ಮಾಡಿದರೆ ಮೂರನೆಯ ಪಾತಕ, ಗುರುವಾಜ್ಞೆಯ ಮೀರಿದರೆ ನಾಲ್ಕನೆಯ ಪಾತಕ, ಶಿವನಿಂದೆಯ ಮಾಡಿದಡೆ ಐದನೆಯ ಪಾತಕ, ಪಂಚಮಹಾಪಾತಕ ಭಕ್ತಂಗಲ್ಲದೆ ಭವಿಗೆಲ್ಲಿಯದು ಕೂಡಲಚೆನ್ನಸಂಗಮದೇವಾ.