Index   ವಚನ - 190    Search  
 
ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು, ಬಸವಗಳಪ್ಪುವೆ, ಲಿಂಗಮುದ್ರೆಯನೊತ್ತದನ್ನಕ್ಕ? ಭಕ್ತಂಗೆ ಭಕ್ತೆಗೆ ಹುಟ್ಟಿದರೆಂದರೆ ಬರಿಯ ಗುರುಕಾರುಣ್ಯದಲ್ಲಿ ಭಕ್ತರಪ್ಪರೆ, ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ? ಅವರನೊಳಗಿಟ್ಟುಕೊಂಡು ನಡೆದರೆ ಭಕ್ತಿಹೀನರೆನಿಸಿತ್ತು, ಕೂಡಲಚೆನ್ನಸಂಗನ ವಚನ.