Index   ವಚನ - 191    Search  
 
ಹುಟ್ಟಿದ ಮಕ್ಕಳು ಪ್ರಬುದ್ಧರಾದಲ್ಲದೆ ಲಿಂಗಸ್ವಾಯತವ ಮಾಡಬಾರದೆಂಬ ಯುಕ್ತಿಶೂನ್ಯರ ನೋಡಿರೇ. ಅಳುಪಿ ತಾಯಿ ತಂದೆ ಅವರೊಡನುಂಡರೆ ಅವರನಚ್ಚ ವ್ರತಗೇಡಿಗಳೆಂಬೆ ಕೂಡಲಚೆನ್ನಸಂಗಯ್ಯಾ.