Index   ವಚನ - 204    Search  
 
ನೀವಲ್ಲದೆ ಬೇರೆ ಮತ್ತನ್ಯವ ತೋರದಿರು ಕಂಡಾ, ಲಿಂಗವೆ. ಬೇರೆ ಮತ್ತೊಂದುವನೆನಗೆ ತೋರದಿರು ಕಂಡಾ, ಲಿಂಗವೆ. ಎನ್ನ ಮನಕ್ಕೆ ಮನವೆ ಸಾಕ್ಷಿ ಕೂಡಲಚೆನ್ನಸಂಗಯ್ಯಾ ನೀನೆ ಬಲ್ಲೆ.