Index   ವಚನ - 205    Search  
 
ಕರ್ಮಜಾತನ ಕಳೆದು ಗುರುಲಿಂಗ ಪುಣ್ಯಜಾತನ ಮಾಡಿದ ಬಳಿಕ, ಶಿವನ ಕುಲವಲ್ಲದೆ ಅನ್ಯಥಾ ಕುಲ ಶರಣಂಗುಂಟೆ? "ಶಿವಧರ್ಮಕುಲೇ ಜಾತಃ [ಪುನರ್ಜನ್ಮ]ವಿವರ್ಜಿತಃ| ಉಮಾ ಮಾತಾ ಪಿತಾ ರುದ್ರೋ ಈಶ್ವರಂ ಕುಲಮೇವ ಚ"|| ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರಿಗೆ ಪ್ರತಿಯ ಕಾಣೆ ಶಿವನ ಕುಲವಲ್ಲದೆ.