ಲಿಂಗವಲ್ಲದೆ ಎನ್ನ ಮನಕ್ಕೆ
ಸಮನಿಸದು, ಸಮನಿಸದು.
ಜಂಗಮವಲ್ಲದೆ ಎನ್ನ ಧನಕ್ಕೆ
ಸಮನಿಸದು, ಸಮನಿಸದು.
ಪ್ರಸಾದವಲ್ಲದೆ ಎನ್ನ ತನುವಿಗೆ
ಸಮನಿಸದು, ಸಮನಿಸದು.
ಕೂಡಲಚೆನ್ನಸಂಗಯ್ಯಾ,
ಇದು ಸತ್ಯ ನೋಡಯ್ಯಾ,
ಸಕಳೇಂದ್ರಿಯಂಗಳು
ಅನ್ಯಸಂಗಕ್ಕೆ ಸಮನಿಸವು, ಸಮನಿಸವು.
Art
Manuscript
Music
Courtesy:
Transliteration
Liṅgavallade enna manakke
samanisadu, samanisadu.
Jaṅgamavallade enna dhanakke
samanisadu, samanisadu.
Prasādavallade enna tanuvige
samanisadu, samanisadu.
Kūḍalacennasaṅgayyā,
idu satya nōḍayyā,
sakaḷēndriyaṅgaḷu
an'yasaṅgakke samanisavu, samanisavu.
ಸ್ಥಲ -
ಮಾಹೇಶ್ವರನ ಪ್ರಸಾದಿಸ್ಥಲ