Index   ವಚನ - 211    Search  
 
ಅಂಗಲಿಂಗಸಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ? ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ, ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ. ಕೂಡಲಚೆನ್ನಸಂಗಮದೇವನ ಹಿಂಗಿ ನುಂಗಿದುಗು[ಳು] ಕಿಲ್ಬಿಷ.